Politics

ಮೋದಿ ಹುಟ್ಟುಹಬ್ಬದ ಅಂಗವಾಗಿ ಜಿಲ್ಲೆಯಲ್ಲಿ ಒಂದು ತಿಂಗಳ ಸೇವಾ ಸಂಕಲ್ಪ ಅಭಿಯಾನ

ಜಿಲ್ಲೆಯಲ್ಲಿ ಒಂದು ತಿಂಗಳ ಕಾಲ ವಿವಿಧ ಸೇವಾ, ಸ್ಪರ್ಧೆ ಕಾರ್ಯಕ್ರಮಗಳ ಆಯೋಜನೆ

avatar
ಸಿಬ್ಬಂದಿ ವರದಿ
ಸೆಪ್ಟೆಂ 22,2026 · 1 ನಿಮಿಷ ಓದು
ಫೋಟೋ

ಹಾಸನ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ದೇಶಾದ್ಯಂತ ವಿವಿಧ ಸೇವಾ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದರ ಭಾಗವಾಗಿ ಹಾಸನ ಜಿಲ್ಲೆಯಲ್ಲಿಯೂ ಒಂದು ತಿಂಗಳ ಕಾಲ 'ಸೇವಾ ಸಂಕಲ್ಪ ಅಭಿಯಾನ' ನಡೆಸಲಾಗುತ್ತಿದೆ ಎಂದು ಸಿದ್ದೇಶ್ ನಾಗೇಂದ್ರ ತಿಳಿಸಿದರು.

ಗುಜರಾತ್ ಮುಖ್ಯಮಂತ್ರಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿ ಬಳಿಕ ಪ್ರಧಾನಮಂತ್ರಿಯಾಗಿ ದೇಶದ ಆಡಳಿತದ ನೇತೃತ್ವ ವಹಿಸಿರುವ ನರೇಂದ್ರ ಮೋದಿ ಅವರ ಜೀವನವನ್ನು ಸೇವೆಗೆ ಮುಡಿಪಾಗಿಟ್ಟ ನಾಯಕತ್ವದ ಮಾದರಿಯಾಗಿ ಪರಿಗಣಿಸಿ, ವಿವಿಧ ಕ್ಷೇತ್ರಗಳಲ್ಲಿ ಜನಪರ ಹಾಗೂ ಸೇವಾ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಸೆ.17ರಂದು ಪ್ರಧಾನಮಂತ್ರಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಂಜೆ 6ರಿಂದ 7ರವರೆಗೆ ದೇಶವ್ಯಾಪಿ 'ಆಶೀರ್ವಾದ ದೀಪ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸುಮಾರು 25 ಕೋಟಿ ದೀಪಗಳನ್ನು ಬೆಳಗಿಸುವ ಸಂಕಲ್ಪದೊಂದಿಗೆ ನಡೆದ ಈ ಕಾರ್ಯಕ್ರಮದ ಅಂಗವಾಗಿ ಹಾಸನದಲ್ಲಿ ಜಿಲ್ಲಾ ಘಟಕ ಹಾಗೂ ವಿವಿಧ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಸಿದ್ದೇಶ್ವರ ಜ್ಯೋತಿರ್ಮಠ ಹಾಸ್ವಾಮಿಗಳ ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಧಾನಮಂತ್ರಿಗೆ ಆಯುಷ್ಯ, ಆರೋಗ್ಯ ಹಾಗೂ ದೇಶವನ್ನು ಮುನ್ನಡೆಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದರು.

ಅಭಿಯಾನದಡಿ 'ವಿಕಸಿತ ಭಾರತ-2047'ರ ಸಂಕಲ್ಪವನ್ನು ಯುವಜನತೆ ಹಾಗೂ ಮಕ್ಕಳಲ್ಲಿ ಮೂಡಿಸುವ ಉದ್ದೇಶದಿಂದ ಶಾಲಾ-ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಕಿರಿಯ ಮಕ್ಕಳಿಗೆ ಚಿತ್ರಕಲೆ ಹಾಗೂ ಹಿರಿಯ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ಮತ್ತು ಪುಸ್ತಕಗಳನ್ನು ನೀಡಲಾಗುವುದು. ಅ.2ರ ಗಾಂಧಿ ಜಯಂತಿಯಂದು ಜಿಲ್ಲೆಯಾದ್ಯಂತ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು.