Entertainment

ಮುಸ್ಲಿಂ ಮುಖಂಡರಿಂದ ಗಣಪತಿ ದರ್ಶನ, ಸೌಹಾರ್ದ ಪ್ರದರ್ಶನ

ಸಕಲೇಶಪುರದಲ್ಲಿ ಗಣೇಶೋತ್ಸವ ಮಂಟಪಕ್ಕೆ ಭೇಟಿ ನೀಡಿ ಸೌಹಾರ್ದತೆ ಮೆರೆದ ಮುಸ್ಲಿಂ ಸಮುದಾಯದ ಮುಖಂಡರು

avatar
ಸಿಬ್ಬಂದಿ ವರದಿ
ಸೆಪ್ಟೆಂ 18,2026 · 1 ನಿಮಿಷ ಓದು
ಮುಸ್ಲಿಂ ಮುಖಂಡರಿಂದ ಗಣಪತಿ ದರ್ಶನ, ಸೌಹಾರ್ದ ಪ್ರದರ್ಶನ

ಸಕಲೇಶಪುರ: ಶಾಂತಿ ಮತ್ತು ಸಾಮರಸ್ಯಕ್ಕೆ ಹೆಸರಾಗಿರುವ ಸಕಲೇಶಪುರದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಗಣೇಶೋತ್ಸವ ಮಂಟಪಕ್ಕೆ ಭೇಟಿ ನೀಡಿ ಗಣಪತಿ ದರ್ಶನ ಪಡೆಯುವ ಮೂಲಕ ಅಪೂರ್ವ ಸೌಹಾರ್ದತೆ ಮೆರೆದರು.

ನಮ್ಮ ಹಿರಿಯರು ಹಾಕಿಕೊಟ್ಟ ಈ ಸೌಹಾರ್ದತೆಯ ಪರಂಪರೆಯನ್ನು ಮುಂದಿನ ಪೀಳಿಗೆಯೂ ಮುಂದುವರಿಸಿಕೊಂಡು ಹೋಗಬೇಕು ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಿ, ಆಶಯ ವ್ಯಕ್ತಪಡಿಸಲಾಯಿತು. ಗಣಪತಿ ಸೇವಾ ಸಮಿತಿಯ ಪ್ರಮುಖರಿಗೆ ಹಾರ-ಶಾಲು ಹಾಕಿ ಗೌರವಪೂರ್ವಕವಾಗಿ ಸನ್ಮಾನಿಸಿ, ಪ್ರೀತಿ-ವಿಶ್ವಾಸ ಹಂಚಿಕೊಂಡರು.

ಪಟ್ಟಣದಲ್ಲಿ ನಡೆಯುವ ರಥೋತ್ಸವ, ಗಣೇಶೋತ್ಸವ ಸೇರಿದಂತೆ ಎಲ್ಲಾ ಧಾರ್ಮಿಕ ಹಾಗೂ ಸಾಮಾಜಿಕ ಆಚರಣೆಗಳಲ್ಲಿ ಜಾತಿ-ಧರ್ಮದ ಭೇದ ಮರೆತು ಎಲ್ಲರೂ ಒಂದಾಗಿ ಪಾಲ್ಗೊಳ್ಳುತ್ತಿರುವುದು ನಮ್ಮ ನೆಲದ ಹೆಮ್ಮೆಯ ಪ್ರತೀಕ ಎಂದು ಸ್ಥಳೀಯ ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಅಭಿಪ್ರಾಯಪಟ್ಟರು.